Welcome, Guest   [ Register | Sign In | Take a tour | Adult Filter: On ]

ಸಾದತ್ ಹಸನ್ ಮಂಟೋರ ಬಹಿಷ್ಕೃತ ಕಥೆಗಳು....


ಸ್ವಾತಂತ್ರ್ಯ ಪೂರ್ವ ಕಾಲದಲ್ಲಿನ ಭಾರತೀಯ ಲೇಖಕ ಅಸದ್ ಮಂಟೋ ಬರೆದ ಕೆಲವು ಕಥೆಗಳಿವು. ಸಾದತ್ ಹಸನ್ ಮಂಟೋ ಬರೆದ ಕಥೆಗಳ ಪೈಕಿ ಕೋರ್ಟ್ ಮೆಟ್ಟಿಲು ಏರಿದ

ಕಥೆಗಳನ್ನೇ ಬಹಿಷ್ಕೃತ ಕಥೆಗಳು ಎಂದು ಡಾ. ಸರಜೂ ಕಾಟ್ಕರ್ ಕನ್ನಡಕ್ಕೆ ಅನುವಾದಿಸಿದ್ದಾರೆ.

ಇಂದಿನ ಸಾಮಾಜಿಕ ಸ್ಥಿತಿಗತಿಗೆ ಹೋಲಿಸಿದಲ್ಲಿ, ಈ ಕಥೆಗಳಲ್ಲಿನ ಅಶ್ಲಿಲತೆ ಏನೂ ಅಲ್ಲ. ಆದರೂ ಕೆಲ ಕಥೆಗಳು ಅವುಗಳಲ್ಲಿನ ಅಶ್ಲಿಲತೆ ಹೊರತಾಗಿಯೂ ಮನ ಕಲುಕುತ್ತವೆ. ಭಾರತ

ಪಾಕ್ ವಿಭಜನೆ ಕಾಲದಲ್ಲಿ ಮುಸ್ಲೀಂ ಯುವತಿಯೊರ್ವಳ ಮೇಲೆ ಆದ ಅತ್ಯಾಚಾರವನ್ನು ಕೇವಲ ಒಂದೇ ವಾಕ್ಯದಲ್ಲಿ ' ನಿರ್ಜೀವ ಕೈಗಳಿಂದ ಸಲವಾರಿನ ಲಾಡಿ ಸಡಿಲಿಸಿ ಜಾರಿಸಿದಳು'

ಎಂದು ಹೇಳುತ್ತಾರೆ. ಸೂಕ್ಷ್ಮ ಮನಸಿನ ಓದುಗ ಮಾತ್ರ ಸಕೀನಾ ಮೇಲೆ ಆಗಿರುವ ಅತ್ಯಾಚಾರವನ್ನು ಗ್ರಹಿಸಬಲ್ಲ. ಇದೇ ರೀತಿಯ ಅತ್ಯಾಚಾರದ ಚಿತ್ರಣ ಸೀಮಾ ಬಿಸ್ವಾಸ್ ನಟಿಸಿದ

ಬ್ಯಾಂಡಿಟ್ ಕ್ವೀನ್ ಮತ್ತು ಭವಂಡರ್ ನಲ್ಲಿ ಚಿತ್ರಿಸಲಾಗಿದೆ.

ಜೀವ ಇದ್ದರೂ ನಿರ್ಜೀವವಾಗಿ ಆಸ್ಪತ್ರೆಗೆ ದಾಖಲಾದ ಸಕೀನಾ ಮೆಲ್ಲನೆ ಚೇತರಿಸಿಕೊಳ್ಳುತ್ತಾಳೆ. ಸುತ್ತ ನಿಂತಿರುವ ಜನರನ್ನು ನೋಡಿ ತನ್ನ ನಿಶ್ಚೇಶ್ಚಿತ ಮುಖದ ಮತ್ತು ನಿರ್ಜೀವ

ಕೈಗಳಿಂದ ಬಿಚ್ಚುವ ಲಾಡಿ ಪ್ರಕ್ರಿಯೆಯನ್ನು ಗಮನಿಸಿ ಆಸ್ಪತ್ರೆಯ ವೈದ್ಯ ಮಾತ್ರ ಗಮನಿಸಿ ಬೆವರೊಡೆಯುತ್ತಾನೆ. ನಾನು ಈ ಜಗತ್ತಿಗೆ ಬಂದಿರುವುದೇ ಅತ್ಯಾಚಾರಕ್ಕೆ ಒಳಗಾಗುವುದಕ್ಕೆ

ಎಂದ ಮೇಲೆ ಪ್ರತಿರೋಧಿಸಿ ಪ್ರಯೋಜನ ಏನು ಎನ್ನುವ ತೀರ್ಮಾನಕ್ಕೆ ಸಕೀನಾ ಬಂದಾಗಿದೆ. ಹಾಗಾಗಿಯೇ ಅವಳು ತನ್ನ ನಿರ್ಜೀವ ಕೈಗಳಿಂದ.....

ಸಾದತ್ ಹಸನ್ ಮಂಟೋ, ದೇವರು ಧರ್ಮಕ್ಕಿಂತ ಬದುಕು ದೊಡ್ಡದು ಎಂದವ. ಅದೇ ರೀತಿ ಬದುಕಿನ ವಿಕಾರತೆಗಳನ್ನು ಮತ್ತು ಧರ್ಮದ ಹೆಸರಿನಲ್ಲಿ ನಡೆಯುವ ಸ್ವಾರ್ಥವನ್ನು

ಬಿಚ್ಚಿಡುವ ಪ್ರಯತ್ನವನ್ನು ಬಹಿಷ್ಕೃತಗೊಂಡ 14 ಕಥೆಗಳಲ್ಲೂ ಬಿಚ್ಚಿಡುತ್ತಾರೆ. ಇನ್ನೊಂದು ಕಥೆ ಸುಲ್ತಾನಾ.. ಇದರಲ್ಲಿನ ಪಾತ್ರ ಸುಲ್ತಾನಾ ವೃತ್ತಿಯಿಂದ ವೇಶ್ಯೆ. ಹೆಚ್ಚಿನ ಗಳಿಕೆಗೆ

ಅಂಬಾಲಾದಿಂದ ದೆಹಲಿಗೆ ಬಂದವಳು. ಆದರೆ, ಗಳಿಕೆ ಇಲ್ಲದೇ ಒದ್ದಾಡುತ್ತಿರುತ್ತಾಳೆ ಮೊಹರಂ ಹಬ್ಬಕ್ಕೂ ಬಟ್ಟೆ ತರಲಾಗದಂತಹ ಹೀನಾಯ ಪರಿಸ್ಥಿತಿ. ಇಂತಹ ಪರಿಸ್ಥಿತಿಯಲ್ಲೇ ಅವಳಿಗೆ ಶಂಕರ್ ಎಂಬ

ವ್ಯಕ್ತಿ ಪರಿಚಯವಾಗುತ್ತಾನೆ. ಮೊಹರಂಗೆ ಕಪ್ಪು ಬಣ್ಣದ ಸಲವಾರ್ ಬೇಕು ಎಂದು ಆ ವ್ಯಕ್ತಿಯ ಹತ್ತಿರ ಹೇಳುತ್ತಾಳೆ. ಹಾಗಿದ್ದರೆ ನಿನ್ನ ಕಿವಿಯಲ್ಲಿ ಜುಮುಕಿ ತೆಗೆದುಕೊಡು ಎಂದು ಹೇಳುತ್ತಾನೆ ಶಂಕರ್.ಅದೇ ಜುಮುಕಿಗಳನ್ನು ಅನ್ವರಿ ಎಂಬ ಇನ್ನೊರ್ವ ವೇಶ್ಯೆಗೆ ಕೊಟ್ಟು ಅಲ್ಲಿಯೂ ಸುಖ ಪಡೆದು ಅವಳಿಂದ ಕಪ್ಪು ಸಲ್ವಾರ್ ಪಡೆದು ಸುಲ್ತಾನಾಗೆ ನೀಡಿ ಅವಳ ದೇಹ ಸುಖವನ್ನು ಅನುಭವಿಸುತ್ತಾನೆ. ಒಂದು ಧಾರ್ಮಿಕ ಆಚರಣೆಗಾಗಿ ಇಬ್ಬರೂ ವೇಶ್ಯೆಯರು ಸುಲಭವಾಗಿ ಮೋಸ ಹೊಗುತ್ತಾರೆ.

ಹಕ್ಕು ನಿರಾಕರಣೆ