Webdunia: Portal - Search - Mail - Greetings   More >>
Support | Font Download | Feedback
Search  
Welcome, Guest  [ Register | Sign In ]

ಥಿಯರಿ ಆಫ್ ಇಕ್ವಿಲಿಬ್ರಿಯಂ ದೋಸ್ತಿ


ಜಬ್ ದೋಸ್ತಿ ಕಿ ದಾಸ್ತಾನ್ ವಕ್ತ್ ಸುನಾಯೆಗಾ
ಹಮ್ ಕೊ ಭಿ ಎಕ್ ಶಕ್ಸ್ ಯಾದ್ ಆಯೆಗಾ
ತಬ್ ಭೂಲ್ ಜಾಯೆಂಗೆ ಜಿಂದಗಿ ಕೆ ಗಮೊಂ ಕೊ
ಜಬ್ ಆಪ್ ಕೆ ಸಾಥ್ ಗುಜರಾ ವಕ್ತ್ ಯಾದ್ ಆಯೇಗಾ..

ಅಗಸ್ಟ್ 14. ಜಿಟಿ ಜಿಟಿ ಮಳೆ. ಕಾಲೇಜು ಪ್ರಿನ್ಸಿಪಾಲ್ ಚೇಂಬರ್ ಎದುರಿನ ಕಟ್ಟೆ.. ಗಡಾ ಗಡಾ ಅಂತ ನಡಗ್ತಾ ನಿಂತದ್ದು. ಬಟ್ಟೆ ಎಲ್ಲ ಒದ್ದೆ ಒದ್ದೆ.. ಅದರ ನಡುವೆಯೂ ಎಕನಾಮಿಕ್ಸ್ ಪ್ರೊಪೆಸರ್ ಕಟ್ಟಿಯ ಟೆಸ್ಟ್ ಕಿರಿಕಿರಿ.. ಹೋಗಲಿ ಬಿಡು ಜಾನ್ ಮೇಯನಾರ್ಡ್ ಕೇಯ್ನ್‌ನ ಥಿಯರಿ ಆಪ್ ಇಕ್ವಿಲಿಬ್ರಿಯಂಗೆ ನಾನು ಕೊಟ್ಟ ಪಡ್ಡೆ ಪಾಯಿಂಟ್ ಆಫ್...ಎಕ್ಸಾಂಪಲ್...

ಅಂದಿನಿಂದಲೇ ಅಲ್ಲವೇ ನನ್ನ ನಿನ್ನ ದೋಸ್ತಿ ಶುರುವಾಗಿದ್ದು. ಕಾಲೇಜು ದಿನಗಳು ಕಳೆದು ಬರೋಬರಿ ಹತ್ತು ವರ್ಷಾ ಆಗಿ ಹೋಗಿದೆ. ಹೇಗೆ ಕಾಲ ಸವೇದು ಹೋಗಿದೆ ಎನ್ನುವುದು ಗೊತ್ತಿಲ್ಲ. ಇಡೀ ಕಾಲೇಜಿನಲ್ಲಿದ್ದ ಚೆಡ್ಡಿ ದೋಸ್ತಿಗಳ ದೋಸ್ತಿ ಹಳ್ಳಾ ಹಿಡಿದು ಕಾಲವಾಗಿ ಹೋಗಿದೆ. ಆದರೆ ನಮ್ಮದು ಇಂದಿಗೂ ಅದೇ ತಾಜಾತನ ಲೈಕ್ ವ್ಹಾ ಕ್ಯಾ ತಾಜ್...ಹೈ... ಈ ಮಾತಿಗೆ ಹದಿನಾರಾಣೆ ಸಾಕ್ಷಿ ಆಮ್ಲೆಟ್ ಗಾಡಿ ರೂಪೇಶ.. ಅಂದೂ ಅದ.. ಸಿಂಗಲ್ ಆಮ್ಲೆಟ್ ಬೈಟು ಇಂದೂ... ಅದೇ ಸಿಂಗಲ್ ಅಮ್ಲೆಟ್ ಬೈಟು... ಮೊನ್ನೆ ಊರಿಗೆ ಬಂದಾಗ ಹೇಳಿದ್ದಲ್ಲ... ಅವನು ಇಪ್ಪತ್ತು ವರ್ಷ ಆತು ನಾನು ಇಲ್ಲಿ ಆಮ್ಲೆಟ್ ಮಾರಾಕ ಹತ್ತಿ. ಅದರಾಗ ಹದಿನೈದು ವರ್ಷ ನಿಮ್ಮನ್ನ ನೋಡೀನಿ...ಅಂದಿದ್ನಲ್ಲ. ಅದಕ್ ನಾವು ಬರೀ ನಕ್ಕದ್ದು ಅಷ್ಟ...

ಯಾಕೋ ಎರಡು ದಿನ ಆಯಿತೊ ನಿನ್ನ ನೆನಪು ಸದಾ ಕಾಡುತ್ತಿದೆ. ಬಹುಶಃ ನೀನು ಚೆನ್ನೈ ಬೇಡ ಎಂದರೂ ಕೇಳದೆ ಇದ್ದದು ತಪ್ಪಾಯಿತು ಅಂತ ಈಗ ಅನ್ನಿಸ್ತಾ ಇದೆ. ಒಂದೇ ಒಂದು ಕಾರಣ ನೀನು ನನ್ನೊಂದಿಗಿಲ್ಲ ಅನ್ನುವುದು. ಇಂದಿಗೂ ಬಾಜಿ ಮಾರ್ಕೆಟ್ ಕಟ್ಟೆ ನಮಗಾಗಿ ಕಾಯುತ್ತಿದಯೊ ಡೀಪ್ಸ್

ಹಕ್ಕು ನಿರಾಕರಣೆ