Webdunia: Portal - Search - Mail - Greetings   More >>
Support | Font Download | Feedback
Search  
Welcome, Guest  [ Register | Sign In ]

ಪಾಕ್‌‌‌‌‌‌‌‌‌‌‌‌ನ ಧರ್ಮ ಭಾರತದ ಭ್ರಷ್ಟತೆ


ಉತ್ತರ ಕರ್ನಾಟಕದಲ್ಲಿ ಹೇಳಿ ಮಾಡಿಸಿದ ಜೋಡಿಗೆ ಕಲಕ ನೀರು... ಎಂಬ ಗ್ರಾಮ್ಯ ಗಾದೆಯ ಮಾತಿನಿಂದ ಅವರಿಬ್ಬರ ಅನೋನ್ಯತೆಯನ್ನು ವಿವರಿಸುತ್ತಾರೆ. ಭಾಷೆ ಒರಟು ಎನಿಸಿದರೂ ಹೇಳುವ ಸತ್ಯ ಸಂಗತಿ ಮನ ಮುಟ್ಟುಂತಿರುತ್ತದೆ. ಒಂದೇ ದಿನ ಸ್ವಾತಂತ್ರ್ಯ ಪಡೆದು ನಂತರ ಇಬ್ಬಾಗವಾದ ಈ ಎರಡು ದೇಶಗಳನ್ನು ಎರಡು ಅಂಶಗಳು ಹಾಳು ಮಾಡುತ್ತಿವೆ. ಈ ವಿಚಾರದಲ್ಲಿ ಭಾರತ ಮತ್ತು ಪಾಕಿಸ್ತಾನ ಜೋಡಿ ನಂ1 ಎಂದು ಹೇಳಿದರೇ ತಪ್ಪಾಗಲಾರದು. ಪಾಕಿಸ್ತಾನದಲ್ಲಿನ ಧರ್ಮಾಂಧತೆ ಮೂಲಭೂತವಾದ ಆ ದೇಶವನ್ನು ವಿಫಲ ರಾಷ್ಟ್ರಗಳ ಪಟ್ಟಿಯಲ್ಲಿ ಈಗಾಗಲೇ ಸೇರಿಸಿಬಿಟ್ಟಿದೆ. ಅಲ್ಲಿ ಧರ್ಮ, ಧರ್ಮಾಂಧತೆ ಬಿಟ್ಟು ಮತ್ತಾವುದು ಸುಲಭವಾಗಿ ಸಿಗುವುದಿಲ್ಲ. ಭಾರತದ್ದು ಅದೇ ಪರಿಸ್ಥಿತಿ ಇಲ್ಲಿ ಸಿಗುವ ಭ್ರಷ್ಟತೆ ಮತ್ತೇಲ್ಲಿಯೂ ಸಿಗಲಾರದು. ಪ್ರಜಾಪ್ರಭುತ್ವ ಅನ್ನುವ ಒಂದು ಸೋಗು ಭಾರತಕ್ಕೆ ಇಲ್ಲದೇ ಹೋಗಿದ್ದಲ್ಲಿ ಇದು ಕೂಡ ವಿಫಲ ರಾಷ್ಟ್ರಗಳ ಪಟ್ಟಿಯಲ್ಲಿ ನಿರಾಯಾಸವಾಗಿ ಸ್ಥಾನ ಪಡೆಯಬಹುದಿತ್ತು.

ಒಂದು ದೇಶದ ಸ್ವತಂತ್ರ ವಿದೇಶಾಂಗ ನೀತಿಯನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿರುವ ಅಣು ಒಪ್ಪಂದದ ಜಾರಿಗೆ ಅಲ್ಪ ಮತದ ಸರಕಾರ ಅಷ್ಟು ತರಾತುರಿ ಮತ್ತು ಮೇಲಾಗಿ ಏಕಪಕ್ಷೀಯ ತೀರ್ಮಾನ ತೆಗೆದುಕೊಂಡಿದ್ದು ಎಷ್ಟು ಸರಿ?

ಇದೆಲ್ಲಕ್ಕಿಂತ ಹೆಚ್ಚಾಗಿ ಇಡೀ ದೇಶವೇ ಎರಡನೇ ಬಾರಿ, ಮೊದಲ ಬಾರಿ ಜೆಎಂಎಂ. ಎರಡನೇ ಬಾರಿ ಒಟಿಗಾಗಿ ನೋಟು ತಲೆ ತಗ್ಗಿಸುವಂತಹ ಪ್ರಕರಣಗಳು ಅನಿರೀಕ್ಷಿತವಾಗಿ ಹೊರಗೆ ಬಿದ್ದಿವೆ. ಮೊದಲನೇಯ ಪ್ರಕರಣದ ತನಿಖೆಯಾಗಿತ್ತು. ನ್ಯಾಯಾಲಯ ಲಂಚ ತಿಂದ ಐವರು ನಿರ್ದೋಷಿಗಳು ಎಂದು ತೀರ್ಪು ಬಂದಿತ್ತು. ಎರಡನೇಯದರ ಗತಿ ಕೂಡ ಅದೇ ಆಗಲಿದೆ. ಸಂಸತ್ತಿನ ಹೊರಗೆ ಲಂಚ ವ್ಯವಹಾರ ನಡೆದಿರುವುದರಿಂದ ಹಕ್ಕುಚ್ಯುತಿಯ ಪ್ರಶ್ನೆ ಉದ್ಭವಿಸಲಾರದು. ಎಂದಿನಂತೆ ನಿವೃತ್ತ ನ್ಯಾಯಾಧೀಶರೊಬ್ಬರು ತನಿಖಾ ಅಯೋಗದ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಮತ್ತು ವರದಿ ಅಷ್ಟೆ ಪ್ರಮಾಣದ ದೂಳು ತಿನ್ನಲಿದೆ. ಇದು ಭವಿಷ್ಯತ್ತಿನ ಮಾತು.

ಪಾಕಿಸ್ತಾನವನ್ನು ಇಂದು ಬಹುವಾಗಿ ಕಾಡುತ್ತಿರುವ ಮತಾಂಧತೆ ಮೂಲಭೂತವಾದಿ ಅದೇ ದೇಶದ ರಾಜಕೀಯ ವ್ಯವಸ್ಥೆ ಕಾರಣ ಇಸ್ಲಾಮಿಕ್ ರಿಪಬ್ಲಿಕ್ ಎಂದು ಘೋಷಿಸಿಕೊಂಡ ಆ ದೇಶದ ರಾಜಕೀಯ ವ್ಯವಸ್ಥೆ 80ರ ದಶಕದಲ್ಲಿ ರಷಿಯಾದ ವಿರುದ್ಧ ಹೋರಾಡಲು ಅಮೆರಿಕದ ಬೆಂಬಲದೊಂದಿಗೆ ಮುಜಾಹಿದ್ದೀನ್‌ಗಳನ್ನು ಬಿಟ್ಟಿತು. ಇದರ ನಡುವೆ ಪಂಜಾಬ್ ಮತ್ತು ಕಾಶ್ಮೀರನಲ್ಲಿ TOPAK ಯೋಜನೆಯನ್ನು ಜಾರಿಗೆ ತಂದಿತು. ಇಂದು ಅಂದು ಮುಂದೆ ಮಾಡಿದ ಮುಜಾಹಿದ್ದೀನ್‌ಗಳಿಗೆ ಕೆಲಸ ಇಲ್ಲ ಅವರನ್ನು ಕಾಶ್ಮೀರನತ್ತ ತಿರುಗಿಸಿದರೆ ಮತ್ತೊಂದು ಕಾರ್ಗಿಲ್ ಒಟ್ಟಿನಲ್ಲಿ ಪಾಕ್ ಪರಿಸ್ಥಿತಿ ಇಂದು ಸೆರಗಿನಲ್ಲಿ ಕೆಂಡ ಕಟ್ಟಿಕೊಂಡ ಪರಿಸ್ಥಿತಿ.

ಭಾರತವನ್ನು ಇಂದು ಅತ್ಯಂತ ಹೀನಾಯವಾಗಿ ಅವಮಾನ ಮಾಡಿದ ಭ್ರಷ್ಟತೆ ನೀರು ಎರೆದಿದ್ದು. ಯಾರು ಎಂದು ಹುಡುಕತ್ತ ಹೋದಲ್ಲಿ ಕಾಂಗ್ರೆಸ್ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲುವಂತಾಗಿದೆ. ಇಂದು ರಾಜಕೀಯದಲ್ಲಿ ಹುಟ್ಟಿದ ಅಪಸವ್ಯಗಳಿಗೆ ಅದೇ ಕಾರಣ ಪಕ್ಷಾಂತರವನ್ನು ಚರಣ್ ಸಿಂಗ್ ಆಡಳಿತಾವಧಿಯಲ್ಲಿ ಬೆಳೆಸಿ ಇಂದು ಅದೇ ತಂತ್ರದ ಮೇಲೆ ಸರಕಾರವನ್ನು ಉಳಿಸಿಕೊಂಡಿದೆ. ಅಂದು ದುಡ್ಡು ನೀಡಿರಲಿಲ್ಲ. ಇಂದು ದುಡ್ಡನ್ನು ಅಪರೋಕ್ಷವಾಗಿ ನೀಡಿದೆ. ಅಮರ್ ಸಿಂಗ್ ನೀಡಿರಬಹುದು ಮತ್ತಾರೋ ನೀಡಿರಬಹುದು. ನೀಡಿದ ನಂತರ ಲಾಭ ದೊರೆತದ್ದು ಇದೇ ಕಾಂಗ್ರೆಸ್ಸಿಗರಿಗೆ ಅಲ್ಲವೇ?

70ರ ದಶಕದಲ್ಲಿ ಭಾರತೀಯ ರಾಜಕಾರಣದಲ್ಲಿ ನಿದಾನವಾಗಿ ತಲೆ ಎತ್ತಿದ ಭ್ರಷ್ಟತೆ ಇಂದು ಸಂಸತ್ತಿನ ಪಡಸಾಲೆಯನ್ನು ನೇರವಾಗಿ ಪ್ರವೇಶಿಸಿದೆ. ಹಾಗಿದ್ದರೆ ಭ್ರಷ್ಟತೆ ಎನ್ನುವುದು ವ್ಯಾಪಿಸಿರದ ಸ್ಥಳ ಯಾವುದು ಎಂಬ ಪ್ರಶ್ನೆಗೆ ಸುಲಭವಾಗಿ ಉತ್ತರ ದೊರಕಲಿಕ್ಕಿಲ್ಲ.

ಪ್ರತಿಸ್ಪಂದನಗಳು

Re: ಪಾಕ್‌‌‌‌‌‌‌‌‌‌‌‌ನ ಧರ್ಮ ಭಾರತದ ಭ್ರಷ್ಟತೆ
ಲೇಖನ ತುಂಬಾ ಚೆನ್ನಾಗಿದೆ.
ಹಕ್ಕು ನಿರಾಕರಣೆ