Webdunia: Portal - Search - Mail - Greetings   More >>
Support | Font Download | Feedback
Search  
Welcome, Guest  [ Register | Sign In ]

ರಾಷ್ಟ್ರವಾದದ ಸುತ್ತ....ವೀರ್..ಜಿನ್ನಾ

ತ್ರಾಸಿಯವರೆ..
ಈ ರೀತಿ ಹೇಳುತ್ತಿದ್ದೇನೆ ಎಂದು ಬೇಸರ ಬೇಡ ನಿಮ್ಮ ಮೂಲ ಲೇಖನದಲ್ಲಿ ನೇರವಾಗಿ ಓದುಗ ಪ್ರಭುವಿಗೆ ವ್ಯಾಖ್ಯಾನಿತ ವಾಸ್ತವಾಂಶಗಳನ್ನು ನೀಡುತ್ತ ಹೋಗಿದ್ದಿರಿ. ಎಲ್ಲಿಯೂ ನೀವು "ವೀರ್" ದೇಶ ಭಕ್ತನಲ್ಲ ಎಂದು ಹೇಳಿಯೇ ಇಲ್ಲ ಒಪ್ಪಿಕೊಳ್ಳುತ್ತೇನೆ.

ಮಾಧ್ಯಮರಂಗದಲ್ಲಿ ನನಗೆ ಇರುವ ಅನುಭವದ ಆಧಾರದ ಮೇಲೆ ಹೇಳಬೇಕು ಎಂದರೆ ಲೇಖನವನ್ನು ಓದುಗನಿಗೆ ನೀಡುವ ಸಂದರ್ಭದಲ್ಲಿ ಇರುವ ವ್ಯಾಖ್ಯಾನಿತ ವಾಸ್ತವ ಸ್ಥಿತಿಗಳನ್ನು ವಿವರಿಸುತ್ತ ಓದುಗನಿಗೆ ಪ್ರಶ್ನೆ ಹಾಕುತ್ತ ಹೋದಲ್ಲಿ ಓದುಗ ತನ್ನಿಂದ ತಾನೇ ಒಂದು ತೀರ್ಮಾನಕ್ಕೆ ಬಂದು ಬಿಡುತ್ತಾನೆ. ಈಗ ನಿಮ್ಮ ಮೂಲ ಲೇಖನದಲ್ಲಿಯೂ ಆಗಿರುವುದು ಅದೇ ಅಲ್ಲವೆ?

ಎರಡನೆ ವಿಚಾರ. ಸಾವರ್ಕರ್ ಕ್ಷಮೆ. ಇಡೀ ಇತಿಹಾಸವೇ ಅವರು ಬ್ರಿಟಿಷರ ಕ್ಷಮೆ ಕೋರಿದ್ದಾರೆ ಎಂದು ದಾಖಲೆ ಸಹಿತ ಹೇಳುತ್ತದೆ. ಇದಕ್ಕೆ ನನ್ನ ಅಭ್ಯಂತರ ಏನೂ ಇಲ್ಲ. ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ನೀವು ನೀಡಿರುವ ಸಾಕ್ಷ್ಯಾಧಾರಗಳಲ್ಲಿ ಇತಿಹಾಸ ಶಾಸ್ತ್ರಜ್ಞರು ಹೇಳಿದಂತೆ ವೀರ್ ಸಾವರ್ಕರ್ ಓರ್ವ ಶಿವಾಜಿ ಮಹಾರಾಜರ ಕಟ್ಟಾ ಅಭಿಮಾನಿ, ಶಿವಾಜಿ ಕೂಡ ಔರಂಗಜೇಬನಿಂದ ಬಂಧನಕ್ಕೆ ಒಳಗಾದ ಸಂದರ್ಭದಲ್ಲಿ ಇದೆ ತಂತ್ರವನ್ನು ಉಪಯೋಗಿಸಿ ಜೈಲಿನಿಂದ ಬಿಡುಗಡೆ ಹೊಂದಿ ನಂತರ ಹಿಂದವಿ ಸ್ವರಾಜ್ ನಿರ್ಮಾಣಕ್ಕೆ ಕೈ ಹಾಕಿದ್ದು. ಇಷ್ಟಾಗಿಯೂ In war and love everything is fair. ಯುದ್ಧವನ್ನು ಸತ್ತು ಗೆದ್ದ ದಾಖಲೆಗಳು ಈ ಜಗತ್ತಿನಲ್ಲಿ ಇಲ್ಲ. ಆದರ್ಶದ ಭರದಲ್ಲಿ ವಾಸ್ತವಿಕ ಜೀವನವನ್ನು ಎಂದೂ ಮರೆಯಬಾರದು. ಕೆಲ ಸಂದರ್ಭಗಳಲ್ಲಿ ಅಪದ್ಧರ್ಮ ಎನ್ನುವ ಸಿದ್ದಾಂತಕ್ಕೆ ನಾವು ಅನಿವಾರ್ಯವಾಗಿ ಕಟ್ಟು ಬೀಳಬೇಕಾಗುತ್ತದೆ. ಉದಾಹರಣೆಗೆ ಮಹಾಭಾರತದ ಯುದ್ಧ. ದ್ರೋಣಾಚಾರ್ಯ ಕೌರವ ಸೇನಾಧಿಪತಿಯಾಗಿ ಯುದ್ಧ ಮುಂದುವರಿಸಿದ್ದಾರೆ. ಪಾಂಡವರ ಸೈನ್ಯವನ್ನು ತರಿದು ಹಾಕುತ್ತಿದ್ದಾರೆ. ದ್ರೋಣಾಚಾರ್ಯ ತಾನಾಗಿಯೇ ಶಸ್ತ್ರ ತ್ಯಾಗ ಮಾಡಬೇಕು ಅವರ ನಿರ್ನಾಮ ಪಾಂಡವರಿಂದ ಸಾಧ್ಯವೇ ಇಲ್ಲ. ಈ ಸಂದರ್ಭದಲ್ಲಿ ಕೃಷ್ಣ, ಧರ್ಮನಿಷ್ಠ ಯುಧಿಷ್ಟೀರನಿಂದ ಒಂದು ಮಾತು ಹೇಳಿಸುತ್ತಾನೆ. ಅಶ್ವತ್ಥಾಮ ಹತಃ ನ ಮಾನವ ನ ಕುಂಜರ ಎಂದು ಯುಧಿಷ್ಟೀರ ಜೋರಾಗಿ ಹೇಳುತ್ತಾನೆ. ಈ ಮಾತು ದ್ರೋಣರ ಕಿವಿಗೆ ಬಿದ್ದ ನಂತರ ಪುತ್ರ ಅಶ್ವತ್ಥಾಮ ಹತನಾದನು ಎಂಬ ಭ್ರಮೆಯಲ್ಲಿ ಶಸ್ತ್ರತ್ಯಾಗ ಮಾಡಿ ಸಮಾಧಿ ಸ್ಥಿತಿ ಸ್ವೀಕರಿಸುತ್ತಾರೆ. ಧರ್ಮಕ್ಕಾಗಿ ಹೋರಾಡುವ ಸಂದರ್ಭದಲ್ಲಿ ಅಧರ್ಮದ ಸಹಾಯ ತೆಗೆದುಕೊಂಡಲ್ಲಿ ತಪ್ಪಲ್ಲ. ಆದರೆ ಅದೇ ಉದ್ದೇಶವಾಗಿರಕೂಡದು ಇದೇ ಈ ಮಾತಿನ ಅರ್ಥ ಎಂದು ಹೇಳಬಹುದು.

1964ರಲ್ಲಿ ಗಾಂಧಿ ಹತ್ಯೆಯ ಸತ್ಯಾಸತ್ಯತೆಗಳನ್ನು ಬಯಲಿಗೆ ಎಳೆಯುವುದಕ್ಕೆ ನೇಮಿಸಿದ್ದ ಎಲ್. ಜೆ. ಕಪೂರ್ ಆಯೋಗದ ವರದಿಯನ್ನು ಪರಿಶೀಲಿಸಬೇಕು ಎಂದು ಹೇಳಿದ್ದಿರಿ. ಈ ದೇಶದಲ್ಲಿ ಅದೂ ಐವತ್ತಕ್ಕೂ ಹೆಚ್ಚು ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಎಂಬ ಪಕ್ಷ, ನ್ಯಾಯಾಂಗದೊಂದಿಗೆ ಆಡಿದ ಚೆಲ್ಲಾಟವನ್ನು ಇಲ್ಲಿ ವಿವರಿಸುತ್ತೇನೆ. ಅಲ್ಪ ಸಂಖ್ಯಾತ ಶಹಾಬಾನೋ ಇಳಿ ವಯಸ್ಸಿನ ಮುದುಕಿ. ದುಡಿಯಲು ಮೈಯಲ್ಲಿ ಶಕ್ತಿ ಇಲ್ಲ. ಅಂತವಳಿಗೆ ಪತಿ ಎನಿಸಿಕೊಂಡವ ತಲಾಖ್ ನೀಡುತ್ತಾನೆ. ರಾಷ್ಟ್ರದ ಸರ್ವೋಚ್ಚ ನ್ಯಾಯಾಲಯವೇ ಅವಳಿಗೆ ಜೀವನಾಧಾರ ನೀಡುವುದು ಪತಿಯಾದವನ ಕರ್ತವ್ಯ ಎಂದು ತೀರ್ಪು ನೀಡುತ್ತದೆ. ಸ್ವಾತಂತ್ರ್ಯ, ಸ್ವಾತಂತ್ರ್ಯಾನಂತರವೂ ಬೇರು ಬಿಟ್ಟ ನಿಂತ ಇದೇ ಕಾಂಗ್ರೆಸ್ ರಾಜೀವ ಗಾಂಧಿ ಆಡಳಿತಾವಧಿಯಲ್ಲಿ ಇಡೀ ಸಂವಿಧಾನಕ್ಕೆ ತಿದ್ದು ಪಡಿ ತಂದು ಆ ಹಣ್ಣು ಹಣ್ಣು ಮುದುಕಿಗೆ ಪರಿಹಾರ ಸಿಗದಂತೆ ಮಾಡಿತು. ಇಡೀ ಅಲ್ಪಸಂಖ್ಯಾತರನ್ನು ಒಲೈಸಬೇಕು ತನ್ನ ವೋಟ್ ಬ್ಯಾಂಕ್ ಇರಬೇಕು ಎನ್ನುವ ಒಂದೇ ಒಂದು ಉದ್ದೇಶದಿಂದ ಸಂವಿಧಾನಕ್ಕೆ ತಿದ್ದುಪಡಿ ತಂದಿತು. ಇಂತಹ ಪಕ್ಷದ ಸರಕಾರ ನೇಮಿಸುವ ಆಯೋಗ ನಿಷ್ಪಕ್ಷಪಾತ ವರದಿ ನೀಡುತ್ತದೆ ಎಂದು ನಾನು ನಂಬುವುದಿಲ್ಲ.

ಅದು ಬಿಟ್ಹಾಕಿ ಸ್ವಾಮಿ. ಮೊನ್ನೆ ಎನ್‌ಡಿಎ ಆಡಳಿತಾವಧಿಯಲ್ಲಿ ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಸಾವಿನ ಹಿಂದಿರುವ ರಹಸ್ಯವನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ ನೇಮಕವಾಗಿದ್ದ ಬ್ಯಾನರ್ಜಿ ಆಯೋಗಕ್ಕೆ ರಷಿಯಾದ ಕೆಜಿಬಿ ಗುಪ್ತಚರರ ವರದಿ ಮತ್ತು ಜಪಾನ್ ಜರ್ಮನಿಗಳಲ್ಲಿ ಅಗತ್ಯ ಮಾಹಿತಿ ದೊರೆತಿತ್ತು. ಅದೇ ಭಾರತ ಸರಕಾರದ ಪತ್ರಾಗಾರದಲ್ಲಿ ನೇತಾಜಿ ಸಂಬಂಧಿಸಿದ ಒಂದೇ ಒಂದು ದಾಖಲೆಯೂ ಇಲ್ಲ. ಅದೇ ವಿಚಿತ್ರ ನೋಡಿ ಅವರಿಗಿಂತಲೂ ಹಳಬರಾದ ವೀರ್ ಸಾವರ್ಕರ್ ಬರೆದ ಕ್ಷಮಾಪಣಾ ಪತ್ರ ಇಂದಿಗೂ ಇದೆ. ಇದೇ ಒಂದು ಆಧಾರದ ಮೇಲೆ ಕಾಂಗ್ರೆಸ್ ಎಂತಹ ಪಕ್ಷ ಮತ್ತು ಎಷ್ಟು ವ್ಯವಸ್ಥಿತವಾಗಿ ಬೇರೆಯವರನ್ನು ತುಳಿಯುತ್ತದೆ ಎನ್ನುವುದು ವೇದ್ಯವಾಗುತ್ತದೆ.

ಕಾಂಗ್ರೆಸ್ ಆಡಳಿತಾವಧಿಯಲ್ಲಿ ಹೊತ್ತಿ ಉರಿದ ಭಟ್ಕಳ ಗಲಭೆಯ ಕುರಿತಂತೆ ಇದೇ ಕಾಂಗ್ರೆಸ್ ಆಡಳಿತಾವಧಿಯ ಕಾಂಗ್ರೆಸ್ ಸರಕಾರ ನೇಮಕ ಮಾಡಿದ್ದ ಜಗನ್ನಾಥ ಶೆಟ್ಟಿ ಆಯೋಗದ ತನಿಖಾ ವರದಿ ಎಸ್.ಎಂ ಕೃಷ್ಣ ಆಡಳಿತಾವಧಿಯಲ್ಲಿ ದೂಳು ತಿನ್ನುತ್ತ ಬಿದ್ದಿತ್ತು. ಮೊನ್ನೆ ಮೊನ್ನೆ ಜೆಡಿಎಸ್-ಬಿಜೆಪಿಯ ಟ್ವೆಂಟಿ 20 ಸರಕಾರದಲ್ಲಿ ಬಿಡುಗಡೆಯಾಗಿತ್ತು. ಯಾಕೆ ಎಸ್‍. ಎಂ ಕೃಷ್ಣ ಆಡಳಿತಾವಧಿಯಲ್ಲಿ ದೂಳಿನಿಂದ ಹೊರಗೆ ಬೀಳಲಿಲ್ಲ.


ಗಾಂಧಿ ಹಂತಕ ಗೊಡ್ಸೆ ಮತ್ತು ಸಾವರ್ಕರ್ ಸಂಬಂಧದ ಕುರಿತು ನಾನು ಅಡ್ಡ ಗೋಡೆಯ ಮೇಲೆ ದೀಪ ಇಟ್ಟ ಹಾಗೆ ಹೇಳಿಲ್ಲ. ಇಲ್ಲಿ ಒಂದು ಉದಾಹರಣೆ ನೀಡುತ್ತೇನೆ. ರಾಜ್ಯದಲ್ಲಿ ಇಂದು ಬಿಎಸ್‌ಪಿಗೆ ಸೇರಿಕೊಂಡಿರುವ ನಾಯಕ ಪಿ.ಜಿ.ಆರ್ ಸಿಂದ್ಯ ಅವರು 1975ರ ತುರ್ತುಪರಿಸ್ಥಿತಿಯ ಕಾಲದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ ಎಂಬ ಪಕ್ಕಾ ಹಿಂದೂ ಸಂಘಟನೆಯ. ಪೂರ್ಣಾವಧಿ ಕಾರ್ಯಕರ್ತರಾಗಿದ್ದರು ಎನ್ನುವುದನ್ನು ಸ್ಪಷ್ಟಪಡಿಸುತ್ತೇನೆ. ಅಲ್ಲಿಂದ ಮುಂದೆ ಸಾಗಿದ ಅವರು ಶಾಂತವೇರಿ ಗೋಪಾಲಗೌಡರ ಅಡಿಯಲ್ಲಿ (ಲೋಹಿಯಾ ವಾದ) ಸಮಾಜವಾದ ಸಿದ್ದಾಂತವನ್ನು ಅಪ್ಪಿಕೊಂಡ ಅಂದಿನ ರಾಜಕೀಯರುಗಳಲ್ಲಿ ಪ್ರಮುಖರು (ಇನ್ನುಳಿದವರು ವೀರೇಂದ್ರ ಪಾಟೀಲ್, ರಾಮಕೃಷ್ಣ ಹೆಗಡೆ, ಕಾಗೊಡು ತಿಮ್ಮಪ್ಪ ಮತ್ತು ಎಸ್. ಬಂಗಾರಪ್ಪ) ಯಾಕೆ ಹೀಗಾಯಿತು? ಸಾರ್ವಜನಿಕ ಜೀವನದಲ್ಲಿ ಆದರ್ಶಗಳ ಭ್ರಮೆಯಾಗುವುದು ಸಹಜ ಎನ್ನುವುದು ನನ್ನ ಅಭಿಮತ. ಹಿಂದುತ್ವ, ರಾಷ್ಟ್ರವಾದದಿಂದ ಸಮಾಜವಾದದತ್ತ ಸಿಂಧಿಯಾ ಒಂದು ಉದಾಹರಣೆ ಮಾತ್ರ.

ಕೊನೆಯದಾಗಿ ನನ್ನ ಲೇಖನದಲ್ಲಿ ಜಿನ್ನಾ ರಾಷ್ಟ್ರೀಯವಾದಿಯಾಗಿದ್ದರೊ ಅಥವಾ ಮೂಲಭೂತವಾದಿಯಾಗಿದ್ದರೊ ಎನ್ನುವುದನ್ನು ಮೊದಲು ಪರಿಶೀಲಿಸಿ. ನಾನು ಜಿನ್ನಾ ಮೂಲಭೂತವಾದಿಯಲ್ಲ ಎನ್ನುವುದನ್ನು ಸ್ಪಷ್ಟವಾಗಿ ಹೇಳಿದ್ದೇನೆ. ಜಿನ್ನಾರ ರಾಜಕೀಯ ಜೀವನ ಪ್ರಾರಂಭವಾಗಿದ್ದು, ತಿಲಕ್‌ರಿಂದ ತಿಲಕ್ ರಾಷ್ಟ್ರೀಯವಾದಿಯಾಗಿದ್ದರು ಎನ್ನುವುದರಲ್ಲಿ ಅನುಮಾನ ಇದ್ದರೆ ತಿಳಿಸಿಬಿಡಿ. ತಿಲಕ್ ನಿದನಾನಂತರ ನೆಹರು ಮನೆತನ ಕಾಂಗ್ರೆಸ್ ಪಕ್ಷದ ಮೇಲೆ ಆಗಲೇ ಹಿಡಿತ ಸಾಧಿಸಿತ್ತು. ಮೊತಿಲಾಲ್, ಜವಾಹರಲಾಲ್ ನಂತರ ಇಂದಿರಾ ಗಾಂಧಿ ಈಗ ಎಲ್ಲ ನಿಮಗೆ ಗೊತ್ತಿದ್ದೆ. ಬೋಸ್ ಅವರ ದಾರಿ ತಪ್ಪಿಸಿದ ರೀತಿಯಲ್ಲಿ ಜಿನ್ನಾರನ್ನು ದಾರಿ ತಪ್ಪಿಸಿದ್ದು. ನಂತರವೇ ಜಿನ್ನಾ ಮುಸ್ಲಿಂ ಲೀಗ್ ಸ್ಥಾಪಿಸಿದ್ದು ನಂತರ ದ್ವಿರಾಷ್ಟ್ರ ಸಿದ್ದಾಂತವನ್ನು ಪ್ರತಿಪಾದಿಸಿದ್ದು. ಇದಕ್ಕೆ ಸಾವರ್ಕರ್ ಒಪ್ಪಿಗೆ ನೀಡಿದ್ದು ಇದೀಷ್ಟು ಇತಿಹಾಸದ ಘಟನಾವಳಿಗಳು.
ಹಕ್ಕು ನಿರಾಕರಣೆ