ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ವರದಿಯಾಗಿರುವ ಕೆಲ ಮಾಹಿತಿಗಳನ್ನೇ ಇಲ್ಲಿ ಗಮನಕ್ಕೆ ತೆಗೆದುಕೊಂಡರೆ ಅಮೆರಿಕ ಏನು ಅನ್ನುವುದು ಸ್ಪಷ್ಟವಾಗುತ್ತದೆ. ಇಲ್ಲಿ ಕೇವಲ ಆಹಾರದ ಕೊರತೆಯನ್ನೇ ಉದ್ದೇಶವಾಗಿ ಇಟ್ಟುಕೊಂಡು ಲೇಖನ ಪ್ರಸ್ತುತಿಯಾಗುತ್ತಿದೆ. ಮೊದಲನೆಯದಾಗಿ ಅಮೆರಿಕದಲ್ಲಿ ದ್ವಿದಳ ಧಾನ್ಯದ ಉಪಯೋಗ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶೇ 11.81ರಷ್ಟು ಏರಿಕೆಯಾಗಿದೆ.
ಭಾರತದ ಆರ್ಥಿಕಾಭಿವೃದ್ದಿ ಕಳೆದ ನಾಲ್ಕು ವರ್ಷಗಳಿಂದ ಶೇ 8.5ರ ಆಸುಪಾಸಿನಲ್ಲಿ ಇದೆ. ಇದೇ ಭಾರತದಲ್ಲಿ ಆಹಾರದ ಬಳಕೆಯ ಪ್ರಮಾಣದಲ್ಲಿ ಕೇವಲ ಶೇ 2.17ರಷ್ಟು ಹೆಚ್ಚಾಗಿದೆ. ಹಾಗಿದ್ದರೆ ಯಾರು ಅತಿ ಹೆಚ್ಚು ಆಹಾರವನ್ನು ಜಾಗತಿಕ ಮಟ್ಟದಲ್ಲಿ ಕಬಳಿಸುತ್ತಿದ್ದಾರೆ.
ಭಾರತದಲ್ಲಿ ಆಹಾರ ಧಾನ್ಯಗಳ ಬೇಡಿಕೆ ಮೀತಿ ಮೀರಿದ ಪ್ರಮಾಣದಲ್ಲಿ ಎರುತ್ತಿದೆ ಎಂದು ಬುಷ್ ಮಹಾಶಯ ಕೆನಡಾದಲ್ಲಿ ನಡೆದ ಯಾವುದೋ ಒಂದು ಸಭೆಯಲ್ಲಿ ಹೇಳಿದ್ದ. ಇದೇ ಮಾತನ್ನು ಬುಷ್ ಮಹಾಶಯನ ಕಾರ್ಯದರ್ಶಿ ಕಾಂಡೋಲಿಜಾ ರೈಸು ಹೇಳಿದ್ದಳು. ನಿಜ ಸಂಗತಿ ಏನು ಅಂದರೆ ಅಮೆರಿಕಕ್ಕೆ ಅನ್ನ ಇಲ್ಲದಿದ್ದರೆ ನಡಿಬಹುದು ಅದರೆ ಡಿಸೇಲ್, ಪೆಟ್ರೋಲ್ ಇಲ್ಲ ಅಂದರೆ ಮುಂದೆ ಸಾಗದು ಅಮೆರಿಕದ ಬಂಡಿ. ಗಲ್ಫ ರಾಷ್ಟ್ರಗಳಿಂದ ಇಂಧನ ಪೂರೈಕೆ ವ್ಯತ್ಯವಾಗುತ್ತಿರುವುದನ್ನು ಗಮನಿಸಿ ಅಮೆರಿಕದ ಕೆಲವು ರೈತರು ಜೈವಿಕ ಇಂಧನ ಕೃಷಿಗೆ ಆದ್ಯತೆ ನೀಡಿದ ಪರಿಣಾಮವಾಗಿ ಸಾವಿರಾರು ಏಕರೆ ಜಮೀನು ಜೈವಿಕ ಇಂಧನ ಕೃಷಿಗೆ ವರ್ಗಾವಣೆಯಾಗಿರುವುದರಿಂದ ಮೂಲತಃ ಅಮೆರಿಕದಲ್ಲಿ ಆಹಾರದ ಅಭದ್ರತೆ ಕಾಡುತ್ತಿದೆ. ಹಣದ ಬಲದ ಮೇಲಿರುವ ಅಮೆರಿಕ ಹೇಗಿದ್ದರೂ ತನ್ನ ಹೊಟ್ಟೆ ತುಂಬಿಸಿಕೊಳ್ಳಬಹುದು. ಆದರೆ ಬಡ ರಾಷ್ಟ್ರಗಳ ಗತಿ ಏನು?
ತಾನು ಮಾಡಿದ ತಪ್ಪನ್ನು ಬೇರೆಯವರ ಮೇಲೆ ಎತ್ತಿ ಹಾಕುವುದು ಅಮೆರಿಕ ಮೊದಲಿನಿಂದಲೂ ಅನುಸರಿಸಿಕೊಂಡು ಬಂದ ನೀತಿ ಈಗ ಈ ವಿಚಾರದಲ್ಲೂ ಅದೇ ಹಾದಿಯಲ್ಲಿ ಸಾಗುತ್ತಿದೆ ಅಷ್ಟೇ.
ಲೋಡ್ ಆಗುತ್ತಿದೆ......
ಪ್ರತಿಸ್ಪಂದನಗಳು