Webdunia: Portal - Search - Mail - Greetings   More >>
Support | Font Download | Feedback
Family Filter | On
Search  
Welcome, Guest  [ Register | Sign In ]

ಸುಳ್ಳೇ ಸುಳ್ಳುಗಳ ಭ್ರಮೆಯಲ್ಲಿ


ಒಂದು ಸುಳ್ಳಿನ ಬದುಕು ಯಾವ ರೀತಿ ಇರುತ್ತದೆ. ಅದರಲ್ಲೂ ಪರಸ್ಪರರು ಪ್ರೀತಿಸಿದ ಎರಡು ಜೀವಗಳು ಅದು ಯಾವುದೋ ಕಾರಣದಿಂದ ದೂರವಾದ ನಂತರ ಮತ್ತೇ ಸಂಧಿಸುವ ಸಂದರ್ಭ ಬಂದಾಗ ಯಾವ ರೀತಿ ತಮಗೆ ತಾವೇ ಆತ್ಮ ವಂಚನೆ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾರೆ ಎನ್ನುವುದಕ್ಕೆ ಉದಾಹರಣೆಯಾಗಿ ನೀಡಬೇಕು ಎಂದರೆ ರೈನ್ ಕೋಟ್.

ನಾಯಕ ಮತ್ತು ನಾಯಕಿಯ ನಡುವಿನ ಹಿಂದಿನ ಯಾವುದೇ ಫ್ಲ್ಯಾಷ್ ಬ್ಯಾಕ್ ಇಲ್ಲದೇ ನಿರೂಪಣೆಯಾಗುವ ಚಿತ್ರದಲ್ಲಿ ಅಗಲಿದ ನಂತರ ನಡೆದ ಜೀವನದ ಘಟನೆಗಳ ಸುತ್ತಲೇ ಅವರ ಸಂಭಾಷಣೆ ಮುಂದುವರಿಯುತ್ತಿರುತ್ತದೆ. ಹಳೆಯದನ್ನು ನೆನೆದು ಕುಳಿತುಕೊಳ್ಳುವ ವಿಚಾರ ಇಬ್ಬರಿಗೂ ಇಲ್ಲವೋ ಅಥವಾ ಉದ್ದೇಶಪೂರ್ವಕವಾದ ತುಡಿತ ಇಬ್ಬರಲ್ಲೂ ಇತ್ತು ಎಂದು ಹೇಳುವುದಕ್ಕಿಂತ ನಾಯಕಿಯಲ್ಲಿ ಮೊದಲೇ ಕಲ್ಪಿಸಿಕೊಂಡ ಆ ಭ್ರಮಾ ಬದುಕಿನ ಚಿತ್ರಣ ನೀಡುವ ತುಡಿತ ಚಿತ್ರದುದ್ದಕ್ಕೂ ಎದ್ದು ಕಾಣುತ್ತದೆ.

ಕಥೆಯಲ್ಲಿ ಸತ್ವವಿರುವುದು ಅಗಲಿಕೆಯಲ್ಲಿ, ಬಡತನದ ಬೇಗೆಯಲ್ಲಿ ನರಳುವವನಿಗೆ ಮನಸ್ಸು ನೀಡಿದರೂ ಐಶ್ವರ್ಯದ ಸುಖದ ಬದುಕು ಹುಡುಕಿಕೊಂಡು ನಿಷ್ಕಲ್ಮಶ ಪ್ರೀತಿಯನ್ನು ದಿಕ್ಕರಿಸಿದವಳಿಗೆ ಏನೂ ಸಿಕ್ಕಿಲ್ಲ. ವಾಸ್ತವಿಕ ಬದುಕಿನ ಸುಖ ಸಂತೋಷಗಳಿಲ್ಲ. ಆದರೂ ಆ ಸತ್ಯವನ್ನು ಮನಸಾರೆ ಇಷ್ಟಪಟ್ಟವನಿಗೆ ಹೇಳಿಕೊಳ್ಳಲಾರದ ಪರಿಸ್ಥಿತಿ. ತಾನೇ ದಿಕ್ಕರಿಸಿದವನ ಎದುರು ಕಂಗಾಲಾಗಿ ನಿಲ್ಲುವುದು ಸ್ವಾಭಿಮಾನಕ್ಕೆ ಪೆಟ್ಟು ನೀಡಿದಂತಾಗುತ್ತದೆ. ಅಲ್ಲವೇ ? ಇದು ನಾನು ಅನುಭವಿಸಿದ ಸಂಗತಿಯೂ ಹೌದು. ಇಂದಿಗೂ ಆ ತಿರಸ್ಕಾರದ ಹಿಂದಿನ ಕಾರಣ ತಿಳಿದಿಲ್ಲ. "ಮುಖಕ್ಕೆ ಹೊಡೆದ ಹಾಗೇ ಮಾತನಾಡುವ ನೀನು, ಬೇರೆಯವರ ಭಾವನೆಗಳಿಗೆ ಗೌರವ ಕೊಡದ ನೀನು ಭಾವನಾ ಹೀನ ವ್ಯಕ್ತಿ" ಎಂದು ಹೇಳಿದರೆ ? ತಿರಸ್ಕಾರಗಳಿಗೆ ಕೆಲ ಕಾರಣಗಳು ಇರುವುದಿಲ್ಲ ಅಂತೆ ಹಾಗೇ ಸುಮ್ಮನೆ ಸಂಬಂಧಗಳ ನಡುವೆ ಒಂದು ಅಂತರ ಏರ್ಪಡುತ್ತದೆ ಆ ಅಂತರ ನಿಧಾನವಾಗಿ ಕವಲಾಗಿ ಸಾಗಿ ಹೋಗುತ್ತದೆ.

ರೈನ್ ಕೋಟ್‌‌‌‌‌‌‌‌‌ನ ನೀಲುಗೂ ಮತ್ತು ಮನೋಜ್ ಅರ್ಧ ದಿನದ ಅವಧಿಯಲ್ಲಿ ನಡೆಯುವ ಸಂಭಾಷಣೆಯಲ್ಲಿ ಪ್ರತಿ ಬಾರಿ ಪ್ರತಿಕ್ಷಣ ಸುಳ್ಳುಗಳ ಸರಮಾಲೆಯನ್ನೇ ಇಬ್ಬರು ಪೋಣಿಸುತ್ತ ಸಾಗುತ್ತಾರೆ. ಒಂದು ಹಂತದಲ್ಲಿ ಒಬ್ಬರಿಗೊಬ್ಬರ ಪರಿಸ್ಥಿತಿಯ ಅರಿವು ಆಗುತ್ತದೆ. ತ್ಯಜಿಸಿದ ಕಾರಣಕ್ಕೊ ಇಲ್ಲ ವಿಫಲ ಪ್ರೇಮದ ಕಾರಣಕ್ಕೊ ತಮ್ಮ ಪರೀಧಿಯಾಚೆ ಹೊರ ಬರುವ ಪ್ರಯತ್ನವನ್ನೇ ಮಾಡುವುದಿಲ್ಲ. ಈ ರೀತಿಯ ಸುಳ್ಳಿನ ಭ್ರಮೆಯ ಬದುಕು ನೆಮ್ಮದಿಯಾಗಿರಲು ಸಾಧ್ಯವಾ ?

ಇದೇ ಚಿತ್ರದೊಂದಿಗೆ ನನ್ನ ಬದುಕಿನ ಕೆಲ ಅಂಶಗಳನ್ನು ಹೋಲಿಸಿಕೊಂಡು ನೋಡಿದಾಗ ಅನ್ನಿಸಿದ್ದು ಇದು ಪ್ರೀತಿಯಲ್ಲ ಕೇವಲ ಭ್ರಮೆ. ಈ ರೈನ್ ಕೋಟ್‌ನಲ್ಲಿ ನೀಲು, ನಾನು ಮದುವೆ ಮಾಡಿಕೊಳ್ಳುವವ ಆರು ಫೂಟ್ ಎತ್ತರದವನು ಎಂದು ನಾಯಕನಿಗೆ ಹೇಳುತ್ತಾಳಲ್ಲ. ಅದು ಒಂದು ತಿರಸ್ಕಾರಕ್ಕೆ ಕಾರಣವಾ? ಅನ್ನಿಸುತ್ತದೆ ಕೆಲ ಸಮಯಗಳಲ್ಲಿ ಕಾರಣಗಳು ಬೇಕಿಲ್ಲ. ಸರಿ ರಾತ್ರಿ ಹುಷಾರಿಲ್ಲದ ಮಲಗಿಲ್ಲದ ಸಮಯದಲ್ಲಿ ಪೋನ್ ಮಾಡಿ ಎಬ್ಬಿಸಿ ಒಂದು ಗಂಟೆ ಹರಟೆ ಹೊಡೆದವಳಿಗೆ ಒಂದೇ ವಾರದ ಅವಧಿಯಲ್ಲಿ ನಾನು ಭಾವನಾ ಹೀನ ವ್ಯಕ್ತಿಯಾಗುತ್ತೇನೆ ವ್ಯಕ್ತಿಯ ಸ್ವಭಾವ ವಾರದಲ್ಲಿ ಬದಲಾಗುತ್ತದಾ ?
ಹಕ್ಕು ನಿರಾಕರಣೆ