Welcome, Guest   [ Register | Sign In | Take a tour | Adult Filter: On ]

ಕೊನೆ ಕ್ಷಣದಲ್ಲಿ ಕಣ್ಣಿರು ತರಿಸಿದ ತಾರೇ ಜಮೀನ್...

ತಾರೇ ಜಮೀನ್‌ನಲ್ಲಿ ದರ್ಶಿಲ್ ಸಫಾರಿಯನ್ನು ನೋಡಿದಾಗ ನನಗೆ ನೆನಪಾಗಿದ್ದು ನನ್ನದೇ ಪ್ರೈಮರಿ ಸ್ಕೂಲಿನ ದಿನಗಳು ಆ ತಾವಲಗಿ ಮಾಸ್ತರು, ಅವರ ಇಂಗ್ಲಿಷ್ ಸ್ಪೆಲ್ಲಿಂಗ್ ಬಾಯಿ ಪಾಠ. ಅತ್ತಾರ್ ಮಾಸ್ತರ್‌ರಿಂದ ತಿಂದ ಚಬಕಿ ಏಟು. ಮೊದಲು ಮೊದಲು ಆರಾಮವಾಗಿ ಕೂತು ನಾನು ಮಾಡಿದ ಕಿತಾಪತಿಗಳೊಂದಿಗೆ ಅವನು ಮಾಡುವ ಹರಸಾಹಸಗಳಿಗೆ ಹೋಲಿಸುತ್ತ ಕುಳಿತಿದ್ದೆ.

ಬಂತು ನೋಡು ಸ್ವಾಮಿ ಆ ದೃಶ್ಯ. ಅವನ ಅಪ್ಪ ಅಮ್ಮ ಅವನ ಕಾಟ ತಾಳಲಾರದೇ ಹೇಗೆ ಬೋರ್ಡಿಂಗ್‌ಗೆ ಇಟ್ಟರೊ ನನಗೆ ಅಂತಹದೇ ಒಂದು ಪರಿಸ್ಥಿತಿ ಪೂರ್ತಾ ಒಂದು ವರ್ಷ ಬಂತು. ಏಳನೆ ಕ್ಲಾಸಿನಲ್ಲಿ ಇದ್ದಾಗ ಸ್ವಂತ ಊರಿನ ಶಾಲೆಯಿಂದ ಚಿಕ್ಕಮ್ಮನ ಮನೆಗೆ ಕಳಿಸಿದ್ದು ಆಗ ಅಮ್ಮನ ನೆನಪು ಯಾವ ಪರಿ ಕಾಡಿತು ಅಂದರೆ ಅದೇ ಲಾಸ್ಟ್ ನಾನು ಅಮ್ಮನ ಬಿಟ್ಟು ಇದ್ದುದು ಆಮೇಲೆ ಇಲ್ಲವೇ ಇಲ್ಲ.

ಚಿತ್ರದ ಈ ಘಟನೆಗಳು ಮನಸ್ಸನ್ನು ಕಳವಳಗೊಳಿಸಿದ್ದಂತೂ ನಿಜ. ರಾತ್ರಿ ರೂಮಿಗೆ ಬಂದು ಮಲಗಿದಾಗ ನಕ್ಕದ್ದೂ ಇದೆ. ನನಗೆ ಚಿತ್ರ ಇಷ್ಟವಾಗಿದ್ದು ಎರಡೇ ಎರಡು ಕಾರಣಕ್ಕೆ ಒಂದು ದರ್ಶಿಲ್ ಅಭಿನಯ ಇನ್ನೊಂದು ಸತತ ಸೋಲಿನ ಸುಳಿಗೆ ಸಿಲುಕಿ ಸಾಯುವ ಹಂತ ತಲುಪಿದವನನ್ನು ಮೇಲೆತ್ತುವ ರಾಮ್ ನಿಕುಂಭ್‌‍ನ ಪ್ರಯತ್ನ. ಒಂದು ಸಣ್ಣ ಗೆಲುವು ಮನುಷ್ಯನ ಮನಸ್ಥಿತಿಯನ್ನು ಹೇಗೆ ಬದಲಾಯಿಸಿ ಬಿಡುತ್ತದಲ್ಲ. ಯೂ ಡಫರ್ ಎಂದು ಸದಾಕಾಲ ಕರೆಸಿಕೊಂಡವನು ಒಂದೀನ ಫೈನಾಗಿ ತನ್ನ ಗುರುವನ್ನೇ ಮೀರಿಸಿದರೆ. ಸೋತವನ್ನಲ್ಲೆ ಒಂದು ಹೆಮ್ಮೆ ಇರುತ್ತದಲ್ಲಾ ಅದು ಮನಸ್ಸಿಗೆ ನಾಟುವಂತಹದ್ದು.

ಬೋರ್ಡಿಂಗ್ ಶಾಲೆ ಸೇರಿದ ನಂತರ ಖಿನ್ನತೆಯತ್ತ ಜಾರಿ ಇನ್ನೇನು ಇಶಾನ್ ಕಥೆ ಅಂತ್ಯ ಎಂದುಕೊಳ್ಳುತ್ತಿರುವಂತೆಯೇ ಕಥೆಯಲ್ಲಿ ಅಮೀರ್ ಪಾತ್ರ ಅನಾವರಣಗೊಳ್ಳುತ್ತದೆ. ವ್ಯಕ್ತಿಯೋರ್ವನಿಗೆ ಶಿಕ್ಷಣಕ್ಕಿಂತಲೂ ಇರುವ ಬುದ್ದಿಶಕ್ತಿಯನ್ನು ಹೇಗೆ ಉಪಯೋಗಿಸಬಹುದು ಎನ್ನುವುದೇ ಚಿತ್ರದ ಕಥಾವಸ್ತು ಆಗಿದ್ದರೂ ಆಗಿರಬಹುದು.

ಇಶಾನ್ ಮಾಡುವ ಆ ಬೋಟ್ ಇದೆಯಲ್ಲ ಅದೊಂದೇ ಸಾಕು ಅವನ Divergent Thinking Style ಸಾಬೀತು ಪಡಿಸಲು. ಇದೇ ರೀತಿ ನಮ್ಮಲ್ಲೂ ಇರಬಹುದಲ್ಲಾ ಇಲ್ಲ ಮುಂದೆ ಹುಟ್ಟುವ ನಮ್ಮ ಮಕ್ಕಳಲ್ಲೂ ಇರಬಹುದಲ್ಲಾ ? ಅದನ್ನ ನೀವು ಹ್ಯಾಗೆ ಗುರುತಿಸುತ್ತಿರಿ ಅನ್ನೊದರ ಮೇಲೆಯೇ ಮಗುವಿನ ಭವಿಷ್ಯ ನಿಂತಿದೆ. ಮಗುವಿನ ಜೀವನ ಅನ್ನೊದು ಇದ್ದುದೆಲ್ಲವ ಬಿಟ್ಟು ಇಲ್ಲದೆಡೆಗೆ ಆಗಬಾರದು.
ಹಕ್ಕು ನಿರಾಕರಣೆ