Webdunia: Portal - Search - Mail - Greetings   More >>
Support | Font Download | Feedback
Family Filter | On
Search  
Welcome, Guest  [ Register | Sign In ]

ಮಗ್ಗಲು ಬದಲಿಸುವ ಸಾವಿನ ಕಥೆಯಾ ಇದು?

ಕೆಲವು ತಿಂಗಳುಗಳ ಹಿಂದೆ ರೈಲಿನಲ್ಲಿ ಹೋಗುತ್ತಿರುವಾಗ ಮಾರಿಯೋ ಫ್ಯುಜೊನ ಗಾಡ್ ಫಾದರ್ ಓದಿದ್ದೆ. ಅದೇಕೊ ಸುಮ್ಮನಾಗಿದ್ದೆ. ಎರಡು ದಿನಗಳ ಹಿಂದೆ ಸ್ನೇಹಿತನ ಬಳಿ ಇದ್ದ ರವಿ ಬೆಳೆಗೆರೆಯ ಕನ್ನಡ ಗಾಡ್ ಫಾದರ್‌ನ್ನು ಎರಡೇ ರಾತ್ರಿಗಳಲ್ಲಿ ಓದಿ ಮುಗಿಸಿದೆ. ಮೈ ಮತ್ತು ಮನ ಇನ್ನೂ ನಿದ್ದೆ ಬೇಕು ಅಂತ ಹೇಳುತ್ತಿರುವಾಗಲೇ ಇದೊಂದು ಅನಿಸಿಕೆ ಹಾಕಿ ಬಿಡೋಣ ಅನಿಸಿತು.

ಅನುವಾದ ಸಾಹಿತ್ಯದಲ್ಲಿ ಓದುವ ಅಸಕ್ತಿ ಹುಟ್ಟಬೇಕು ಎಂದರೆ ಅದು ಎಲ್ಲೊ ನಮ್ಮ ಪಕ್ಕವೇ ನಡೆದ ಘಟನೆಯಂತಿರಬೇಕು. ಆಗಾಗ ಓದುಗನ ಮನಸ್ಸು ತನ್ನ ಸುತ್ತಲಿನ ಪರಿಸರವನ್ನು ಕಲ್ಪಿಸಿಕೊಂಡು ಅಕ್ಷರಗಳ ಲೋಕದಲ್ಲಿ ತನ್ಮಯನಾಗಲು ಪ್ರಯತ್ನಿಸುತ್ತದೆ. ಎಲ್ಲೊ ಕಾಣದ ಊರು ಕೇಳದ ಹೆಸರುಗಳಿಂದ ಪುಸ್ತಕವನ್ನು ತುಂಬಿದರೆ ಅದು ಓದುಗನನ್ನು ಎಂದಿಗೂ ತನ್ನ ಜಗತ್ತಿನಲ್ಲಿ ಎಳೆದುಕೊಳ್ಳಲಾರದು.

ರವಿಬೆಳಗೆರೆಯದೇ ಆಗಲಿ ಫ್ಯುಜೊನ ಗಾಡ್ ಫಾದರ್ ಆಗಲಿ. ಭೂಗತ ಲೋಕದಲ್ಲಿ ಮಗ್ಗಲು ಬದಲಿಸುವ ಸಾವಿನ ಕಥೆಯನ್ನು ಹೆಣೆದುಕೊಂಡು ಬಿದ್ದಿದೆ. ಅಲ್ಲಿ ಸಾವು ಕೊಲೆಗಳಿಗೆ ವಂಚನೆಗಳಿಗೆ ಲೆಕ್ಕವಿಲ್ಲ. ನಿರಂತರವಾಗಿ ಸಾಗುವ ಸಾಗುವ ಕೊಲೆಯ ಕಥೆಯನ್ನು ರವಿ ಬೆಳಗೆರೆ ಮಾತ್ರ ಕನ್ನಡದಲ್ಲಿ ಅದ್ಭುತವಾಗಿ ಬಿಡಿಸಿಡಬಲ್ಲ ಲೇಖಕ.

ಅದೇಕೊ ರವಿ ಬೆಳಗೆರೆಯ ಲೇಖನಗಳಲ್ಲಿ ಸಾವಿನ ಕುಣಿಕೆಗಳ ಕಥೆಯೇ ತುಂಬಿ ಹೋಗುತ್ತಿವೆ ಏನೊ ಎಂದು ರೇಶ್ಮೆ ರುಮಾಲು ಮತ್ತು ಗಾಡ್ ಫಾದರ್ ಓದಿದ ಮೇಲೆ ಅನಿಸುತ್ತಿದೆ. ಆ ಜಗತ್ತುಗಳೇ ಹಾಗಿದ್ದ ಮೇಲೆ ಲೇಖಕ ಏನೂ ಮಾಡುವಂತಿಲ್ಲ.

Every hermitt has sinister past ಎನ್ನುವ ಹಾಗೆ ಪ್ರತಿಯೋಬ್ಬ ಪಾತಕಿಯ ಜೀವನದ ಹಿಂದೆ ಒಂದು ಸಭ್ಯ ಜೀವನ ಇರುತ್ತದಾ. ಇಲ್ಲ ಪಾಪಿಯೋರ್ವ ಮಾಡಿದ ತಪ್ಪಿಗೆ ಪ್ರಾಯಶ್ಚಿತವಾಗಿ ಸಾಧುವಾಗಿರಬಹುದು, ಸಂತನಾಗಬಹುದು ಬೈರಾಗಿಯಾಗಬಹುದು. ಪಾತಕ ಲೋಕ ಇದೆಯಲ್ಲ ಅದು ಹುಚ್ಚು ಮನಸ್ಸಿನ ಕುದುರೆಯನ್ನು ಅನಾಮತ್ತಾಗಿ ತನ್ನತ್ತ ಸೇಳೆಯುವಂತಹದು. ಬೇಡ ಎಂದರೂ ದ್ವೇಷಗಳು ಹುಟ್ಟುತ್ತವೆ ವಿನಾಕಾರಣ ಅಪನಂಬಿಕೆಯ ಅಪಸವ್ಯದ ರಾಗ ಕೇಳಿ ಬರುತ್ತದೆ. ಅದೆಲ್ಲದರ ಒಟ್ಟು ಫಲಿತಾಂಶವೇ ಸಾವು. ಅದು ಸಾವಲ್ಲ. ಇವನು ಇಲ್ಲಿ ಮೈಮರೆತು ಕುಳಿತಿದ್ದರೆ ಅಲ್ಲಿ ಸಾವು ಮೈಮುರಿದು ಮರಾ ಮೋಸದಲ್ಲಿ ಮೇಲೆ ಬಿದ್ದಿರುತ್ತದೆ. ಬಿದ್ದಿದೆ ಅನ್ನೊವಷ್ಟರಲ್ಲಿ ಸಾವಿನ ಮನೆ ತಲುಪಿಯಾಗಿರುತ್ತದೆ.

ಪ್ರತಿಸ್ಪಂದನಗಳು

Re: ಮಗ್ಗಲು ಬದಲಿಸುವ ಸಾವಿನ ಕಥೆಯಾ ಇದು?
ಚೆನ್ನಾಗಿದೆ
ಹಕ್ಕು ನಿರಾಕರಣೆ