ಬಿದ್ದು ನೋಡಿ ಒಮ್ಮೆ ಈ ಮೋಹದ ಬಲೆಯಲ್ಲಿ
ಮುಂಗಾರು ಮಳೆಯ ಪ್ರೀತಂ ಹೇಳುವ ಡೈಲಾಗ್ ತರಾನೇ ಆಗುತ್ತೆ. ಎಂತಹದೋ ಒಂದು ನೋವು ಆದರೂ ಅವಳು ನೆನಪಿಗೆ ಬಂದಾಗಲೇಲ್ಲ ಏನೊ ಒಂಥರಾ ಖುಷಿ.. ಅವಳು ಪಕ್ಕ ಇಲ್ಲ. ಅವಳು ತಿರುಗಿ ನೋಡೊದು ಹೋಗಲಿ ಒಂದು ಮೆಸೆಜಿಗೂ ರಿಪ್ಲೈ ಮಾಡ್ತಿಲ್ಲ ಆದ್ರೂ ಅವಳು ಬೇಕು ಅವಳೊಂದಿಗೆ ಮಾತನಾಡ್ಬೇಕು ಅನ್ನಿಸುತ್ತಿರುತ್ತದೆ.
ಒಂದೇ ಒಂದು ದಿನ ಅವಳು ಕೋಪಿಸಿಕೊಂಡಿರಲಿ. ಆ ನೋವು ಭಗವಂತನಿಗೆ ಪ್ರೀತಿ. ಯಾಕೆ ನಾನಿಷ್ಟ ಪಟ್ಟ ಹುಡುಗಿ ನನ್ನಿಂದ ದೂರವಾಗುತ್ತಿದ್ದಾಳಾ ? ಎರಡು ದಿನದ ನಂತರ ಯಥಾವತ್ ಆಗಿರಲಿ. ಆಗೀನ ಆ ಖುಷಿ ಎದುರು ಎಲ್ಲ ಬೇಡ ಅನ್ನಿಸುತ್ತದೆ. ಕುಂತರೆ ನಿಂತರೆ ಅವ್ಳದೆ ದ್ಯಾನ ಜೀವಕ್ಕಿಲ್ಲ ಸಮಾಧಾನ ಅನ್ನೊಹಂಗೆ.... ಇಡೀ ಜಗತ್ತೇ ಗೆಲ್ಲುವ ಛಲದಲ್ಲಿ ಇರುವವನು ಒಂದೇ ಒಂದು ಬಾರಿ ಅವಳ ಎದುರು ನಿಂತು ನೀನಂದ್ರೆ ನನಗಿಷ್ಟ ಚಿನ್ನೂ... ಅಂತ ಪಿಸುಗುಡುವುದಕ್ಕೂ ಹೆದರುತ್ತಾನಲ್ಲ ಅಂತವನಿಗೆ ಏನು ಅನ್ನಬೇಕು. Infatuation ಅಥವಾ ಮೋಹ ಇಲ್ಲ ಪ್ರೀತಿಯ ಸೆಳೆತಕ್ಕೆ ಸಿಲುಕುವ ಈ ಸಮಯದಲ್ಲಿ ಹುಡುಗ ನೀರಿನಿಂದ ಹೋರಬಿದ್ದ ಮೀನಿನಂತೆ ಒಂದೇ ಸಮ ಪಕಾ ಪಕಾ ಅಂತ ಒದ್ದಾಡೊದು. ಬೇರೆಯವರಿಗೆ ಗೊತ್ತಾಗಲ್ಲ. ಅವಳಿಗೆ ಗೊತ್ತಾಗದೇ ಇರುತ್ತಾ. ಗೊತ್ತಿಲ್ಲ. ಎಲ್ಲದರತ್ತೂ ಅಸಡ್ಡೆ... ಅಂತಾದ್ರಲ್ಲಿ ಯಾರಾದ್ರೂ ಕೆಣಕಬೇಕು. ಲೇ ಹೋಗಲೆ ಅನ್ನೊವರ್ಗೂ ಹೋಗಿರ್ತಾನೆ....
ಅಲ್ಲಿ ಹೇಳೊಕೂ ಆಗದೇ ಮನಸ್ಸಿನ ತುಂಬ ತುಂಬಿಕೊಂಡ ಪ್ರೀತಿಯ ಹೆಂಡದ ಹಳವಂಡವನ್ನ ಎಲ್ಲಿ ಬಿಚ್ಚಿಡಬೇಕು. ಅದಕ್ಕೆ ಅವನಿಗೆ ಕೊನೆಯ ಆಸರೆಯಾಗಿ ಸಿಗೋದು ಸಿನಿಮಾ ಹಾಡುಗಳೊ ಇಲ್ಲ ಅವನ ಸ್ವರಚಿತ ಕವನಗಳೋ ಅಂತೂ ಒಂದು ಸಣ್ಣದಾದ ಮೋಹ ಈ ಜಗತ್ತಿನ ಅಮರ ಪ್ರೇಮ ಕಾವ್ಯಗಳ ಸಾಲಿನಲ್ಲಿ ಸೇರಿ ಹೋಗುವಂತೆ ಮಾಡುತ್ತದೆ.

ಲೋಡ್ ಆಗುತ್ತಿದೆ......